Monday 5 August 2013

ಗೋದಿಯ ಸತ್ವವನ್ನು ಸಿದ್ಧ ಮಾಡುವ ಪಾಕಕೃತಿ (ರೆಸಿಪಿ)

Recipe of Wheat Concentrate (Gavhache sattva)
ಗೋದಿಯ  ಸತ್ವವನ್ನು ಸಿದ್ಧ ಮಾಡುವ ಪಾಕಕೃತಿ (ರೆಸಿಪಿ)



೨೭ ನೇ ಜೂನ್ ೨೦೧೩ ರ ಪ್ರವಚನದಲ್ಲಿ ಬಾಪೂರವರು ವಿಶದ ಮಾಡಿದ  ಗೋದಿಯ ಸತ್ವವನ್ನು ಸಿದ್ಧ ಮಾಡುವ ಪಾಕಕೃತಿಯನ್ನು (ರೆಸಿಪಿ) ಇಲ್ಲಿ ಕೊಡಲಾಗಿದೆ. ಗೋದಿಯನ್ನು ರಾತ್ರಿ ನೀರಿನಲ್ಲಿ ನೆನೆದಿಡಬೇಕು. ಈ ನೀರನ್ನು ಮರುದಿವಸ ತೆಗೆದುಹಾಕಿ ಆ ಗೋದಿಯನ್ನು ಪುನ: ಬೇರೆ ನೀರು ಹಾಕಿ ನೆನೆದಿಡಬೇಕು. ಮೂರನೇಯ ದಿವಸ ಈ ನೀರನ್ನು ತೆಗೆದುಹಾಕಿ ಇದೇ ಗೋದಿಯನ್ನು ನೀರಿನಲ್ಲಿ ನೆನೆದಿಡಬೇಕು. ನಾಲ್ಕನೇ ದಿವಸ ಗೋದಿಯ ನೀರನ್ನು ತೆಗೆದುಹಾಕಿದ ನಂತರ ಈ ನೆನೆದಿಟ್ಟ ಗೋದಿಯಲ್ಲಿ ಸ್ವಲ್ಪ ಬೇರೆ ನೀರು ಹಾಕಿ ಈ ಗೋದಿಯನ್ನು ರುಬ್ಬಿಕೊಳ್ಳಬೇಕು. (ಮಿಕ್ಸರಿನಲ್ಲಿ ಅಥವಾ ಕಲ್ಲಿನಲ್ಲಿ) ಈ ಪ್ರಕಾರ ರುಬ್ಬಿದ ಗೋದಿಯನ್ನು ಹಿಂಡಿ ಅದನ್ನು ಸೋಸಿಕೊಂಡು ಬಂದ ಮೆದು ಪದಾರ್ಥವನ್ನು ಒಂದು ಪಾತ್ರೆಯಲ್ಲಿ ತೆಗೆದು ಅದನ್ನು ಮುಚ್ಚಿಡಬೇಕು.

ಆರೇಳು ಗಂಟೆಯ ನಂತರ ಪಾತ್ರೆಯ ಮುಚ್ಚಳವನ್ನು ತೆಗೆದು ನೋಡಬೇಕು. ಗೋದಿಯ ಸತ್ವವು ಪಾತ್ರೆಯ ಬುಡದಲ್ಲಿದ್ದು ಮೇಲೆ ಕೇವಲ ನೀರು/ಸೋಸಿದ ನೀರು ಕಾಣುವದು. ಮೇಲೆ ಬಂದ ಸೋಸಿದ ನೀರು ತೆಗೆದುಹಾಕಬೇಕು. ಈ ಪ್ರಕಾರ ಸಿದ್ದವಾದ ಗೋದಿಯ ಸತ್ವವನ್ನು ಒಂದು ಸೀಸೆಯಲ್ಲಿ ಅಥವಾ ಡಬ್ಬಿಯಲ್ಲಿ ಹಾಕಿಡಬೇಕು.

ಪರ್ಯಾಯ ೧:
ಸ್ಥೂಲ ವ್ಯಕ್ಯಿಯರಿಗಾಗಿ :-
೧) ಗೋದಿಯ ಸತ್ವ - ಒಂದು ವಾಟಿ 
೨) ನೀರು - ನಾಲ್ಕು ವಾಟಿ
೩) ಹಿಂಗು - ಒಂದು ಚಿಕ್ಕ ಚಮಚೆ
೪) ಉಪ್ಪು (ರುಚಿಗನುಸಾರವಾಗಿ)
೫) ಜೀರಿಗೆ ಪುಡಿ (ರುಚಿಗನುಸಾರವಾಗಿ)
ಮೇಲೆ ಹೇಳಿದ ಮಿಶ್ರಣವನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು ಅದನ್ನು ಚಿಕ್ಕ (ಗ್ಯಾಸಿನ) ಉರಿಯ ಮೇಲೆ ಕುದಿಸಬೇಕು. ಈ ಮಿಶ್ರಣವನ್ನು ಸತತವಾಗಿ ತಿರಿಗಿಸುತ್ತಿರುವ ಆವಶ್ಯಕತೆ ಇದೆ, ಯಾಕೆಂದರೆ ಇದರ ಮುದ್ದೆಯಾಗಿ ಗಟ್ಟಿ ಆಗುವುದಿಲ್ಲ.

ಪರ್ಯಾಯ ೨ :-
ಕೃಶ (ತೆಳು) ವ್ಯಕ್ತಿಯರಿಗಾಗಿ :-
೧) ಗೋದಿಯ ಸತ್ವ - ಒಂದು ವಾಟಿ)
೨) ತುಪ್ಪ - ಎರಡು ಚಮಚೆ
೩) ಹಾಲು - ಒಂದು ವಾಟಿ
೪) ಸಕ್ಕರೆ - ಎರಡು ಚಮಚೆ
೫) ಏಲಕ್ಕಿ ಪುಡಿ (ರುಚಿಗನುಸಾರವಾಗಿ)
ಒಂದು ಪಾತ್ರೆಯಲ್ಲಿ ಎರಡು ಚಮಚೆ ತುಪ್ಪ ಹಾಕಿದ ನಂತರ ಇದರಲ್ಲಿ ಗೋದಿಯ ಸತ್ವವನ್ನು ಹಾಕಬೇಕು. ಆನಂತರ ಅದರಲ್ಲಿ ಒಂದು ವಾಟಿಯಷ್ಟು ಹಾಲು ಮತ್ತು ಎರಡು ಚಮಚೆ ಸಕ್ಕರೆ ಹಾಕಿ ಅದನ್ನು ಚಿಕ್ಕ ಗ್ಯಾಸಿನಲ್ಲಿ ಕುದಿಸಬೇಕು. ಏಲಕ್ಕಿ ಹುಡಿ (ಬೇಕಿದ್ದರೆ) ಹಾಕಿ ಅದನ್ನು ಸತತ ತಿರಿಗಿಸುತ್ತಿರಬೇಕು. ನುಣ್ಣಗಾದ ಮಿಶ್ರಣದಲ್ಲಿ ಮಿನುಗು ಬಂದ ಮೇಲೆ ಅದು ಚೆನ್ನಾಗಿ ಬೆಂದಿದೆಯೆಂದು ತಿಳಿದು ಗ್ಯಾಸ್ ಆರಿಸಬೇಕು.

ಗೋದಿಯ ಸತ್ವ ದಿನಕ್ಕೊಮ್ಮೆ ಒಂದು ಸಲವಾದರು ನಿತ್ಯ ಬಳಸುವ ವಾಟಿಯಷ್ಟು ತಿನ್ನಬೇಕು.

(ಟಿಪ್ಪಣೆ: ಈ ರೆಸಿಪಿಯ ವ್ಹಿಡಿಯೊ ಬೇಗನೇ ಕೊಡಲಾಗುವದು)

No comments:

Post a Comment