Thursday 26 September 2013

ವಿಶ್ವದ ರಹಸ್ಯ ತ್ರಿವಿಕ್ರಮ - π (Pi)

ಕಳೆದ ಹಲವು ವಾರಗಳಿಂದ ಪರಮಪೂಜ್ಯ ಬಾಪೂರವರ ಪ್ರವಚನಗಳು ಶ್ರೀ ಅನಿರುದ್ಧ ಗುರುಕ್ಷೇತ್ರಮ್ ಮಂತ್ರದಲ್ಲಿರುವ ಅಂಕುರಮಂತ್ರದ ಭಾಗದಲ್ಲಿಯ ಮೂರನೇ ಪದವಾದ  "ಓಂ" ರಾಮವರದಾಯಿನಿ ಶ್ರೀಮಹಿಷಾಸುರಮರ್ದಿನೈ ನಮ: |" ದ ಮೇಲೆ ಆಗುತ್ತಿದೆ.


ಈ ಪ್ರವಚನದಲ್ಲಿ ಬಾಪೂರವರು ನಮಗೆ ಪರಮೇಶ್ವರಿ ಸೂತ್ರ  (algorithms) ಹಾಗು ಶುಭಚಿಹ್ನೆಗಳ ಪರಿಚಯವನ್ನು ಮಾಡಿಕೊಟ್ಟರು. ಈ ಸೂತ್ರದ ಮೂಲಕ ಬಾಪೂರವರು ನಮಗೆ ಸ್ಕಂದಚಿಹ್ನೆ, ಸ್ವಸ್ತಿಕ, ಸೃಷ್ಟಿಯ ಸೂರ್ಯ ಹಾಗು ಚಂದ್ರ, ದೀಪ, ಆರತಿಯಂತಹ ಅನೇಕ algorithms ಗಳ ಬಗ್ಗೆ ವಿಸ್ತಾರವಾಗಿ ಮಾಹಿತಿಯನ್ನು ಹೇಳಿದರು.

ಅದರನಂತರ ಜುಲೈ ತಿಂಗಳಿನಲ್ಲಿ ಬಾಪೂರವರು  ಪ್ರವಚನವನ್ನು ಆರಂಭ ಮಾಡುವ ಮೊದಲು ನಮಗೆ ಹೇಳಿದ್ದರು, "ಇವತ್ತು ನಮಗೆ ವಿಶ್ವದ ಬಹಳ ದೊಡ್ಡ ರಹಸ್ಯವನ್ನು ನೋಡಬೇಕಾಗಿದೆ" ಮತ್ತು ಈ ಪ್ರವಚನದಲ್ಲಿ ಬಾಪೂರವರು ಪ್ರಶ್ನೆ ಕೇಳಿದ್ದರು, ಗಣಿತದಲ್ಲಿರುವ Pi (π) constant (ಸ್ಥಿರಾಂಕ) ಹೇಗೆ ನಿರ್ಮಾಣವಾಯಿತು? ಮತ್ತು ಅದರ ಉತ್ತರ ಕೊಡುವಾಗ ತಿಳಿಸಿ ಹೇಳಿದರು, Pi (π) ಈ ಸ್ಥಿರಾಂಕ ಸೃಷ್ಟಿಯಲ್ಲಿ ಎಂದೂ ಬದಲಾಯಿಸುವುದಿಲ್ಲ ಹಾಗೆಯೇ ಈ ಸ್ಥಿರಾಂಕವೆಂದರೆ ವರ್ತುಳದ ಪರೀಘ ಭಾಗಿಲೆ ವ್ಯಾಸ. ಇದನ್ನು ಹೇಳುವಾಗ ಹನುಮಂತನೊಡನೆ ಇದರ ಸಂಬಂಧ ಹೇಗಿದೆ, ಹನುಮಂತನ ಈ ವರ್ತುಳದ ಸಂಬಂಧ ಹೇಗಾಗಿರುವುದನ್ನು ವಿವರಿಸುವಾಗ ಶ್ರೀಮಾರುತಿ ಸ್ತ್ರೋತ್ರದ" ಬ್ರಹ್ಮಾಂಡಭೋವತೆ ವೇಢೆ ವಜ್ರ ಪುಚ್ಛೆ ಕರು ಶಕೆ " ಈ ಸಾಲಿನ ಉಲ್ಲೇಖ ಮಾಡಿ ತಿಳಿಸಿದರು.  ಅದರ ನಂತರ ಈ ವರ್ತುಳಾಕೃತಿಯಾದ ಬ್ರಹ್ಮಾಂಡಕ್ಕೆ ಹನುಮಂತನ ಬೀಲದ ಸುತ್ತು ಹೇಗೆ ಚಿರಕಾಲದತನಕ ಇರುವುದನ್ನು ಕೂಡ ಬಾಪೂ ಸ್ಪಷ್ಟ ಮಾಡಿದರು.

ಹಿಂದೆ ಮಾಡಿರುವ ಪ್ರವಚನದಲ್ಲಿ ಅಂದರೆ ೮ ಆಗಷ್ಟ್ ೨೦೧೩ ರ ಪ್ರವಚನದಲ್ಲಿ ಬಾಪೂರವರು Pi (π) ಸ್ಥಿರಾಂಕದ ಮುನ್ನೂರ ಅರವತ್ತು ದಶಾಂಶದ ತನಕ ಬೆಲೆಯನ್ನು ತೋರಿಸಿಕೊಟ್ಟರು. ಈ ಬೆಲೆಯನ್ನು ಐದು-ಐದರ ಭಾಗ (set) ದಲ್ಲಿ ತೋರಿಸಿ ಅದು ಐದು-ಐದರ ಸೆಟ್ಟಿನಲ್ಲಿ ಯಾಕಿರುವುದನ್ನು ವಿಶದ ಮಾಡಿದರು.

ಆದರೆ ಅನೇಕರ ತಪ್ಪು ಕಲ್ಪನೆಯಿರುವುದೇನೆಂದರೆ ೨೨/೭ ಇದು Pi (π)  ಅದರ ಸರಿಯಾದ ಬೆಲೆ (exact value) ಆಗಿರುವದು. ಆದರೆ ಅದು ಹಾಗಿರದೆ  Pi (π) ಒಂದು ಸ್ಥಿರಾಂಕವಾಗಿದೆ. ’Pi or Π is an irrational number, which means that it cannot be expressed exactly as a ratio of any two integers. Fractions such as 22/7 are commonly used as an approximation of Π; no fraction can be its exact value.’ ಗಣಿತಜ್ನರು ಇಷ್ಟರವರೆಗೆ ದಶಾಂಶ ಚಿಹ್ನೆಯ ಮುಂದೆ ಐದು ದಶಲಕ್ಷ ಅಂಕೆಯ ತನಕ Pi (π) ಅದರ ಬೆಲೆಯನ್ನು ಕಂಡುಹಿಡಿದಿದ್ದಾರೆ.

ಭಾರತೀಯ ಅಧ್ಯಾತ್ಮ ಶಾಸ್ತ್ರದಲ್ಲಿ  Pi (π) ಈ ಸಂಜ್ನೆಯನ್ನು ತ್ರಿಪುರಾರಿ ತ್ರಿವಿಕ್ರಮ ಚಿಹ್ನೆಯಿಂದ ತೋರಿಸಲಾಗುತ್ತಿದೆ ಎಂದು ಬಾಪೂರವರು ವಿಶದ ಮಾಡಿದರು. ಇದನ್ನು ಹೇಳುವಾಗ ಬಾಪೂರವರು ಮುಂದೆ ಹೇಳಿದರು, "ಈ ಬ್ರಹ್ಮಾಂಡದ ಅಂದರೆ ಆದೀಮಾತೆಯು ನಿರ್ಮಾಣ ಮಾಡಿರುವ ವಿಶ್ವದ ವಿಸ್ತಾರವು ಸಂತುಲಿತವಾಗಿದೆ. ಅದರ ಮಿತಿ ಅಂದರೆ (ಲಿಮಿಟ್) ಹನುಮಂತನಾಗಿರುವನು. ಆದ್ದರಿಂದಲೇ ಅವನು ಪ್ರಥಮಪುತ್ರ (ದತ್ತಾತ್ರೇಯ ಸ್ವರೂಪ ಶುಭಪ್ರಕಾಶ) ನಾಗಿರುವನು. ಮತ್ತು ಈ ಬ್ರಹ್ಮಾಂಡದ ವ್ಯಾಸವು ಈ ತ್ರಿವಿಕ್ರಮ (ಹರಿಹರ) ಅಂದರೆ ಮಹಾವಿಷ್ನು ಮತ್ತು ಪರಮಶಿವ ಏಕತ್ರಿತವಾಗಿರುವದು; ಶ್ರೀರಾಮ ಮತ್ತು ಹನುಮಂತ ಏಕತ್ರಿತ; ಶೌರ್ಯ ಹಾಗು ಕ್ಷಮೆ ಏಕತ್ರಿತವಾಗಿರುವಂತೆ ಇರುವದು.

೨೨/೭ ಈ ಗಣಿತಸಂಖ್ಯೆಯು  Pi (π) ನ approximation ಅಂದರೆ ಅಂದಾಜು ಹಾಕಿದ ಬೆಲೆಯಾಗಿರುವದು ಅಂದರೆ ಭೌತಿಕ ಜಗತ್ತಿನ ಸಾಮಾನ್ಯ ಗಣಿತದಲ್ಲಿ ಅದನ್ನು ಈ ಪದ್ಧತಿಯಲ್ಲಿ ಉಪಯೋಗ ಮಾಡಲಾಗುವದು.

ಬಾಪೂರವರು ಹೇಳಿದ ಪ್ರಕಾರ ತ್ರಿವಿಕ್ರಮವು ಅನಂತನಾಗಿರುವುದರಿಂದ Pi (π) ಗಣಿತಸಂಜ್ನೆಯ exact ಬೆಲೆಯನ್ನು ತೆಗೆಯಲು ಅಸಾಧ್ಯವಾಗಿದೆ.

No comments:

Post a Comment